ತತ್ವಶಾಸ್ತ್ರ (ಲೇಖನಗಳು)

ತತ್ತ್ವಶಾಸ್ತ್ರವನ್ನು ಕುರಿತಂತೆ ಈ ವಿಶ್ವಕೋಶದಲ್ಲಿ ಅನೇಕ ಲೇಖನಗಳಿವೆ. ತತ್ತ್ವಶಾಸ್ತ್ರ ಎಂಬ ಲೇಖನ ಆ ಶಾಸ್ತ್ರದ ಸ್ಥೂಲ ಪರಿಚಯ ಮಾಡಿಕೊಡುತ್ತದೆ. ತತ್ತ್ವಶಾಸ್ತ್ರದ ಇತಿಹಾಸ ಎಂಬ ಲೇಖನದಲ್ಲಿ ಅದರ ಪಾಶ್ಚಾತ್ಯ ಹಾಗೂ ಪೌರಸ್ತ್ಯ ಚರಿತ್ರೆ ಇದೆ. ತತ್ತ್ವಶಾಸ್ತ್ರ — ತತ್ತ್ವಶಾಸ್ತ್ರೀಯ ಅಧ್ಯಯನಗಳು ಎಂಬುದು ತತ್ತ್ವಶಾಸ್ತ್ರಕ್ಕೂ ಇತರ ಶಾಸ್ತ್ರಗಳಿಗೂ ಇರುವ ಸಂಬಂಧಗಳನ್ನು ಕುರಿತದ್ದಾಗಿದೆ.

	ಇವಲ್ಲದೆ ಆಧುನಿಕ ಪಾಶ್ಚಾತ್ಯ ತತ್ತ್ವದ ಮುನ್ನಡೆ, ಮಧ್ಯಯುಗದ ಪಾಶ್ಚಾತ್ಯ ತತ್ತ್ವಗಳು, ಸಮಕಾಲೀನ ಪಾಶ್ಚಾತ್ಯ ತತ್ತ್ವದ ಮುನ್ನಡೆ — ಎಂಬವು ಸಮಗ್ರವಾಗಿ ಪಾಶ್ಚಾತ್ಯ ತತ್ತ್ವ ವಿಚಾರವನ್ನು ತಿಳಿಸುವ ಲೇಖನಗಳಾಗಿವೆ.

	ಅದ್ವೈತ, ಅನಿಶ್ಚಿತವಾದ, ಅರಿಸ್ಟಾಟಲ್, ಅದಿಶಂಕರಾಚಾರ್ಯ, ಇಸ್ಲಾಂ ಧರ್ಮ, ಉಪನಿಷತ್ತುಗಳು, ಋಗ್ವೇದ, ಕ್ರೈಸ್ತಧರ್ಮ, ಗ್ರೀಕ್ ಧರ್ಮ, ಚಾರ್ವಾಕ ಸಿದ್ಧಾಂತ, ಚೀನೀ ತತ್ತ್ವ, ಜಪಾನೀ ತತ್ತ್ವ, ಜರತುಷ್ಟ ಮತ, ಜ್ಞಾನ ಮಾರ್ಗ, ಜೈನಧರ್ಮ, ದ್ವೈತ, ನಾಸ್ತಿಕವಾದ, ನಿರೀಶ್ವರವಾದ, ಪರಾತತ್ತ್ವ, ಬೌದ್ಧಧರ್ಮ ಭಾರತೀಯ ದರ್ಶನಗಳು, ಮಧ್ವಾಚಾರ್ಯ, ರಾಮಾನುಜಾಚಾರ್ಯ, ಯೋಗ — ಈ ಮೊದಲಾದ ಮುಖ್ಯ ಲೇಖನಗಳು ಇಲ್ಲಿನ ವಿಷಯ ವ್ಯಾಪ್ತಿಯನ್ನು ತೋರಿಸುತ್ತವೆ. ಯಾವ ಒಂದು ವಿಷಯದ ಮೇಲಿನ ವಿವರಣೆ ಬೇಕಾದರೂ ಮೊದಲು ಸಾಮಾನ್ಯ ವಿಷಯ ಸೂಚಿಯನ್ನು ನೋಡುವುದು ಒಳಿತು.					

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ